== ಪೀಠಿಕೆ == ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ ೨೫೦, ಅದರಲ್ಲಿ ೧೨ ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. ಈ ೧೨ ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇ.) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ. ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯಸಭೆಯ ಸದಸ್ಯರ ಅವಧಿ ೬ ವರ್ಷ. ಇದರಲ್ಲಿ ರಾಜ್ಯಸಭೆಯ ೧/೩ರಷ್ಟು ಸದಸ್ಯರು ೨ ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, == ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ == ದಿನಾಂಕ : ೪-೯-೨೦೧೩ : 04, 2013 == 11-6-2014 ಚುನಾವಣೆ == 11-6-2014-ತೆರವಾದ ನಾಲ್ಕು ಸ್ಥಾನಗಳಿಗೆ ಕರ್ನಾಟಕ ವಿಧಾನ ಪರಿಷತ್ತಿನಿಂದ ರಾಜ್ಯ ಸಭೆಗೆ ಅವಿರೋಧ ಆಯ್ಕೆ ಬಿ.ಕೆ.ಹರಿಪ್ರಾಸಾದ್ -ಕಾಂಗ್ರೆಸ್. ಪ್ರೊ.ಎಂ.ವಿ.ರಾಜೀವ ಗೌಡ -ಕಾಂಗ್ರೆಸ್. ಪ್ರಭಾಕರ ಬಿ.ಕೋರೆ.-ಕಾಂಗ್ರೆಸ್. ಡಿ.ಕುಪೇಂದ್ರ ರೆಡ್ಡಿ -ಜೆ.ಡಿ.(ಎಸ್.) === ೨೫-೪-೨೦೧೬ ರಲ್ಲಿ ಆಯ್ಕೆ === ಹೊಸದಾಗಿ ಆಯ್ಕೆಯಾದ ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಸದಸ್ಯರು: ಹಿಮಾಚಲ ಪ್ರದೇಶ ಆನಂದ್ ಶರ್ಮಾ; ಅಸ್ಸಾಂನಿಂದ ರಾಣೇ ನಾರಾಹ ಮತ್ತು ರಿಪುನ್ ಬೋರಾ, ಮತ್ತು ಪ್ರತಾಪ್ ಸಿಂಗ್ ಬಾಜ್ವಾ ಮತ್ತು ಪಂಜಾಬ್ನಿಂದ ಶಂಶೇರ್ ಸಿಂಗ್ ದುಲ್ಲೊ. ಕಮ್ಯುನಿಸ್ಟ್ ಪಕ್ಷ ಭಾರತೀಯ ಮಾರ್ಕ್ಸ್ವಾದಿ (ಸಿಪಿಎಂ)ಇಬ್ಬರು ಸದಸ್ಯರು; ಕೇರಳದಿಂದ ಕೆ ಸೋಮಪರಸಾದ್; ತ್ರಿಪುರದಿಂದ ಝಾರ್ನಾ ದಾಸ್ ಬೈದ್ಯ, ಪಂಜಾಬ್ ನಿಂದ ಶಿರೋಮಣಿ ಅಕಾಲಿ ದಳದ ಸದಸ್ಯ ನರೇಶ್ ಗುಜ್ರಾಲ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಶ್ವೆತ್ ಮಲಿಕ್ === ರಾಜ್ಯಸಭೆಯಲ್ಲಿ ಪಕ್ಷದ ಸದಸ್ಯರು === (ಏಪ್ರಿಲ್ 2016 25) ಮೈತ್ರಿಗಳು -> == ರಾಜ್ಯಸಭೆ ಚುನಾವಣೆ 2016 == ರಾಜ್ಯಸಭಾ ಸದಸ್ಯರನ್ನು ನೇರವಾಗಿ ಜನರು ಆಯ್ಕೆ ಮಾಡುವುದಿಲ್ಲ. ಸಾರ್ವಜನಿಕರು ಆಯ್ಕೆ ಮಾಡಿದ ಜನಪ್ರತಿನಿಧಿಗಳಾದ ಶಾಸಕರು(ಎಂಎಲ್ಎ) ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುತ್ತದೆ. ರಾಜ್ಯ ಆಸೆಂಬ್ಲಿಯಲ್ಲಿ ಹೆಚ್ಚಿನ ಸ್ಥಾನ ಹೊಂದಿರುವ ಪಕ್ಷದ ಸಹಜವಾಗಿ ಹೆಚ್ಚು ಸದಸ್ಯರನ್ನು ತನ್ನ ಪಕ್ಷದಿಂದ ರಾಜ್ಯಸಭೆಗೆ ಕಳಿಸಬಹುದು. ಮತ ಲೆಕ್ಕಾಚಾರ ಹೇಗಿರುತ್ತೆ? ಒಟ್ಟು ಮತಗಳು / (ರಾಜ್ಯಸಭಾ ಸ್ಪರ್ಧೆಗಿರುವ ಸ್ಥಾನಗಳು +1) +1 ಉದಾ: ರಾಜ್ಯಸಭಾ ಸ್ಥಾನ ಗೆಲ್ಲಲು ಕರ್ನಾಟಕದ ಅಭ್ಯರ್ಥಿಗೆ (240/4+1) +1 ಅಂದರೆ 45ಮತಗಳು ಬೇಕು. ನಾಮ ನಿರ್ದೇಶನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸದಸ್ಯರನ್ನು ನಾಮನಿರ್ದೇಶಿತರಾಗಿ ರಾಷ್ಟ್ರಪತಿಗಳು ಆಯ್ಕೆ ಮಾಡಬಹುದಾಗಿದೆ. ಉಳಿದ ಸದಸ್ಯರನ್ನು ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಆಯ್ಕೆ ಮಾಡುತ್ತಾರೆ. ದೇಶದ ಪ್ರತಿ ನಿಗದಿಗೊಳಿಸಿದ ಸದಸ್ಯರು ರಾಜ್ಯಸಭೆಗೆ ಆಯ್ಕೆ ಆಗಲು ಅವಕಾಶವಿರುತ್ತದೆ. ರಾಜ್ಯಸಭೆಗೆ ಆಯ್ಕೆಯಾದ ಸದಸ್ಯರ ಅವಧಿ 6 ವರ್ಷ. ಇದರಲ್ಲಿ ರಾಜ್ಯಸಭೆಯ 1/3ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. 30 ವರ್ಷ ಕನಿಷ್ಠ ವಯೋಮಿತಿ ಇರುವ ಅಭ್ಯರ್ಥಿಗಳು ಸ್ಪರ್ಧಿಸಬಹುದು. ಲೋಕಸಭೆಯ ಸಮನಾದ ಅಧಿಕಾರವನ್ನು ರಾಜ್ಯಸಭೆ ಹೊಂದಿದ್ದು, ಕೆಲವು ವಿಷಯಗಳಲ್ಲಿ ಲೋಕಸಭೆಯು ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದಾಗಿದೆ. ಕೆಲವು ಪ್ರಮುಖ ವಿಷಯಗಳ ಬಗ್ಗೆ ಜಂಟಿ ಸದನಗಳ ಬೈಠಕ್ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ನಾಮಪತ್ರ ಸಲ್ಲಿಸುವ ಪ್ರತಿ ಅಭ್ಯರ್ಥಿಯು ತಮ್ಮ ನಾಮಪತ್ರವನ್ನು ನಿಗದಿತ ನಮೂನೆ 2ಸಿಯಲ್ಲಿ ಸಲ್ಲಿಸಬೇಕು ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ ಕನಿಷ್ಟ ಹತ್ತು ಜನ ಹಾಲಿ ಶಾಸಕರು ಸಹಿ ಮಾಡಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ ರೂ 5000 ರೂ., ಇತರ ಅಭ್ಯರ್ಥಿಗಳು 10 ಸಾವಿರ ರೂ. ಠೇವಣಿ ಇಡಬೇಕು. == ರಾಜ್ಯಸಭೆ ಬಲಾಬಲ == 2016 ಮೇ: === ಕರ್ನಾಟಕದ ಸದಸ್ಯರು === ಕರ್ನಾಟಕ ಅಸೆಂಬ್ಲಿ: 224 ಸದಸ್ಯರ ಅಸೆಂಬ್ಲಿಯಲ್ಲಿ 124 ಸ್ಥಾನ ಬಲ ಹೊಂದಿರುವ ಕಾಂಗ್ರೆಸ್ ಗೆ ಇಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಅವಕಾಶವಿದೆ. ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್ (40) ಕೂಡಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ 46 ಸದಸ್ಯರ ಬಲ ಹೊಂದಿದೆ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ನಾಲ್ವರು ಸದಸ್ಯರ ಪೈಕಿ ಮೂವರು ನಿವೃತ್ತರಾಗಲಿದ್ದು, ಒಂದು ಸ್ಥಾನ ರಾಜೀನಾಮೆಯಿಂದ ತೆರವಾಗಿದೆ. ಈ ಸ್ಥಾನಗಳನ್ನು ಭರ್ತಿ ಮಾಡಲು 2016ರ ಜೂನ್ 11ರಂದು ಚುನಾವಣೆ ನಡೆಸಲಾಗುತ್ತದೆ. ನಿವೃತ್ತರಾಗಲಿರುವವರು ಎಂ.ವೆಂಕಯ್ಯ ನಾಯ್ಡು (ಬಿಜೆಪಿ) ಆಯನೂರು ಮಂಜುನಾಥ್ (ಬಿಜೆಪಿ) ಆಸ್ಕರ್ ಫರ್ನಾಂಡೀಸ್ (ಕಾಂಗ್ರೆಸ್) ರಾಜೀನಾಮೆ ನೀಡಿದವರು ವಿಜಯ್ ಮಲ್ಯ (ಪಕ್ಷೇತರ) ಚುನಾವಣೆ ವೇಳಾಪೆಟ್ಟಿ ಮೇ 24ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಜೂನ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಜೂನ್ 3 ಕೊನೆಯ ದಿನವಾಗಿದೆ. ಜೂನ್ 11ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಅಂದು ಸಂಜೆ ಫಲಿತಾಂವನ್ನು ಪ್ರಕಟಿಸಲಾಗುತ್ತದೆ. ಮಹಾರಾಷ್ಟ್ರ :ಆರು ರಾಜ್ಯಸಭಾ ಸ್ಥಾನಗಳಿಗೆ ಕಣದಲ್ಲಿ ಆರು ಮಂದಿ ಮಾತ್ರ ಇದ್ದರು. ಹೀಗಾಗಿ, ಆರೂ ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ವಿಧಾನ ಭವನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ರಾಜ್ಯಸಭೆಗೆ ಕೇಂದ್ರ ವಿದ್ಯುತ್‌ ಸಚಿವ ಪಿಯೂಷ್‌ ಗೋಯಲ್‌ ಮತ್ತು ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಎನ್‌ಸಿಪಿಯ ಕೇಂದ್ರ ಮಾಜಿ ಸಚಿವ ಪ್ರಫುಲ್‌ ಪಟೇಲ್‌, ಬಿಜೆಪಿಯ ವಿನಯ್‌ ಸಹಸ್ರಬುದ್ಧೆ ಹಾಗೂ ವಿಕಾಸ್‌ ಮಹಾತ್ಮೆ ಮತ್ತು ಶಿವಸೇನೆಯ ಸಂಜಯ್‌ ರಾವತ್‌ ಅವರು ಮಹಾರಾಷ್ಟ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರೈಲ್ವೆ ಸಚಿವ ಸುರೇಶ್ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಸತ್ಯನಾರಾಯಣ ಚೌಧರಿ ಶುಕ್ರವಾರ ಅವಿರೋಧವಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಬಿಹಾರದಿಂದ ಜೆಡಿಯು ಶರದ್ ಯಾದವ್, ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸ ಭಾರ್ತಿ, ಬಿಜೆಪಿಯ ಗೋಪಾಲ್ ನಾರಾಯಣ್ ಸಿಂಗ್ ಕೂಡ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. == ೨೦೧೬ ಒಟ್ಟು ಫಲಿತಾಂಶ == ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌, ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂ, ಆರ್‌ಜೆಡಿಯಿಂದ ರಾಮ್‌ಜೇಠ್ಮಲಾನಿ, ಮತ್ತು ತಮಿಳುನಾಡಿನಿಂದ ಎಐಎಡಿಎಂಕೆ ಮತ್ತು ಡಿಎಂಕೆಯ 6 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎನ್‌ಸಿಪಿಯ ಕೇಂದ್ರ ಮಾಜಿ ಸಚಿವ ಪ್ರಫುಲ್‌ ಪಟೇಲ್‌, ಬಿಜೆಪಿಯ ವಿನಯ್‌ ಸಹಸ್ರಬುದ್ಧೆ ಹಾಗೂ ವಿಕಾಸ್‌ ಮಹಾತ್ಮೆ ಮತ್ತು ಶಿವಸೇನೆಯ ಸಂಜಯ್‌ ರಾವತ್‌ ಅವರು ಆಯ್ಕೆಯಾಗಿದ್ದಾರೆ.ರೈಲ್ವೆ ಸಚಿವ ಸುರೇಶ್ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಸತ್ಯನಾರಾಯಣ ಚೌಧರಿ ಶುಕ್ರವಾರ ಅವಿರೋಧವಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಬಿಹಾರದಿಂದ ಜೆಡಿಯು ಶರದ್ ಯಾದವ್, ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸ ಭಾರ್ತಿ, ಬಿಜೆಪಿಯ ಗೋಪಾಲ್ ನಾರಾಯಣ್ ಸಿಂಗ್ ಕೂಡ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ೪. === ಅವಿರೋಧವಾಗಿ ಆಯ್ಕೆಯಾದ ಸದಸ್ಯರು === === ಆವಿರೋಧ ಆಯ್ಕೆ ಪಕ್ಷವಾರು === === ಚುನಾಯಿತರಾದವರ ವಿವರ === == ಚುನಾವಣೆ ನಂತರ -ಮೈತ್ರಿಕೋಟ- ಬಲಾಬಲ == 245 ಸದಸ್ಯ ಬಲದ ರಾಜ್ಯಸಭೆಯಲ್ಲಿ 69 ಸದಸ್ಯರನ್ನು ಹೊಂದಿದ್ದ ಎನ್‌ಡಿಎ ಬಲ ಇದೀಗ ಐವರು ಹೊಸ ಸದಸ್ಯರ ಸೇರ್ಪಡೆಯಿಂದಾಗಿ 74ಕ್ಕೆ ಜಿಗಿದಿದ್ದು, 74 ಸದಸ್ಯರನ್ನು ಹೊಂದಿದ್ದ ಯುಪಿಎ ಮೂವರನ್ನು ಕಳೆದುಕೊಳ್ಳುವ ಮೂಲಕ ಅದರ ಬಲ 71ಕ್ಕೆ ಇಳಿದಿದೆ. ಮತ್ತೂಂದೆಡೆ ಪ್ರಾದೇಶಿಕ ಪಕ್ಷಗಳ ಬಳಿ ಮೊದಲಿನಂತೆಯೇ 89 ಸದಸ್ಯರು ಇದೆ. ದಿ.೧೩-೬-೨೦೧೬-ಪ್ರಜಾವಾಣಿ;ರಾಜ್ಯಸಭೆ:ಏರಿದ ಎನ್'ಡಿಎ. ಬಲ ಬಿಜೆಪಿ ನಾಯಕ ನವಜೋತ್ ಸಿಂಗ್ ಸಿಧು ಅವರು ರಾಜ್ಯಸಭಾ ಸದಸ್ಯತ್ವಕ್ಕೆ ದಿ.೧೭-೭-೨೦೧೬ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಸಿಧು ರಾಜೀನಾಮೆ ಪತ್ರವನ್ನು ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಅಂಗೀಕರಿಸಿದ್ದಾರೆ. ಸಿಧು ಅವರು ನಾಮನಿರ್ದೇಶನದ ಮೂಲಕ ಏಪ್ರಿಲ್ 22ರಂದು ರಾಜ್ಯಸಭಾ ಸದಸ್ಯರಾಗಿದ್ದರು. == ೨೦೧೬ ಕರ್ನಾಟಕದ ಚುನಾಔಣಾ ಫಲಿತಾಂಶ == ದಿ.೧೧-೬-೨೦೧೬:ರಾಜ್ಯಸಭೆಗೆ ಕರ್ನಾಟಕ ವಿಧಾನಪರಿಷತ್ತಿನಿಂದ ಆಯ್ಕೆಯಾದರು: ಒಟ್ಟು ಚಲಾವಣೆಯಾದ ಮತ 224: ಜಯ ಕಾಂಗ್ರೆಸ್‌ನ ಕೆ.ಸಿ.ರಾಮಮೂರ್ತಿ 52 ಮತ ಕಾಂಗ್ರೆಸ್‌ ಅಭ್ಯರ್ಥಿಗಳಾದ ಜೈರಾಂ ರಮೇಶ್‌- 47, ಕಾಂಗ್ರೆಸ್‌ ಆಸ್ಕರ್‌ ಫ‌ರ್ನಾಂಡಿಸ್‌- 46 ಮತ್ತು ಬಿಜೆಪಿಯ ನಿರ್ಮಲಾ ಸೀತಾರಾಮನ್‌- 46 ಮತ , ಫೋಟೊ::.//ರಾಜ್ಯಸಭೆ-ನಿರೀಕ್ಷಿತ-ಫಲಿತಾಂಶ ಪರಾಭವ ಜೆಡಿಎಸ್‌ನ ಬಿ.ಎಂ.ಫಾರೂಕ್‌ 33 ಮತ (ಸೋಲು) === ನಾಮಕರಣ ಸದಸ್ಯರು === ನಾಮ ನಿರ್ದೇಶನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸದಸ್ಯರನ್ನು ನಾಮನಿರ್ದೇಶಿತರಾಗಿ ರಾಷ್ಟ್ರಪತಿಗಳು ಆಯ್ಕೆ ಮಾಡಬಹುದಾಗಿದೆ. ಉಳಿದ ಸದಸ್ಯರನ್ನು ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಆಯ್ಕೆ ಮಾಡುತ್ತಾರೆ. ದೇಶದ ಪ್ರತಿ ನಿಗದಿಗೊಳಿಸಿದ ಸದಸ್ಯರು ರಾಜ್ಯಸಭೆಗೆ ಆಯ್ಕೆ ಆಗಲು ಅವಕಾಶವಿರುತ್ತದೆ.(ಅವರು ಎಎಪಿ ಸೇರುವ ಸಾಧ್ಯತೆ ಇದೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಿಧು ಅವರು ಪಕ್ಷದ ಮುಂಚೂಣಿ ನಾಯಕರಾಗಿ ಬಿಂಬಿತರಾಗಲಿದ್ದಾರೆ ಎನ್ನಲಾಗಿದೆ.) == ನೋಡಿ == ಲೋಕಸಭೆ == ಬಾಹ್ಯ ಸಂಪರ್ಕ ಕೊಂಡಿಗಳು == ರಾಜ್ಯಸಭೆ ಭಾರತ ಭಾರತ ಸರಕಾರದ ರಾಜ್ಯಸಭೆಯ ಅಂತರಜಾಲ ಪುಟ 2016-08-29 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತ ಸರಕಾರದ ರಾಜ್ಯಸಭೆಯ ಬಗ್ಗೆ ಅನೇಕ ಬಾರಿ ಕೇಳಲಾಗುವ ಪ್ರಶ್ನೋತ್ತರಗಳು 2009-06-21 ವೇಬ್ಯಾಕ್ ಮೆಷಿನ್ ನಲ್ಲಿ. ನಾಮಕರಣ ಸದಸ್ಯರ ಪಟ್ಟಿ 2009-04-19 ವೇಬ್ಯಾಕ್ ಮೆಷಿನ್ ನಲ್ಲಿ. ಸದಸ್ಯರ ರಾಜ್ಯವಾರು ಪಟ್ಟಿ 2009-04-19 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ ==